Search This Blog

Sunday, August 1, 2010

nanna anubhava in The Hindu

ಹಿಂದುವಿನಲ್ಲಿ ಆಂತರಿಕ ತರಬೇತಿ ಪಡೆಯಲು ಬಂದ ನಾನು ಆಂತರಿಕವಾಗಿ ನನ್ನನ್ನು ಬದಲಾಯಿಸಿ ಕೊಂಡಿದ್ದಲ್ಲದೆ, ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಅವಶ್ಯಕವಾದ ವಿಷಯಗಳನ್ನು ಕಲಿಯುತ್ತಿದ್ದೇನೆ. ತರಬೇತಿ ಇಂದ ಅನುಭವ ಬೆಳಯುತ್ತಿದೆ, ಈ ಅನುಭವಕ್ಕಿಂತ ನನಗೆ ಅನುಭವಿಗಳ ಜೊತೆ ಕಳೆಯುತ್ತಿರುವ ಘಳಿಗೆ ಅಮೂಲ್ಯವದದ್ದು.
ಮುಖ್ಯವಾಗಿ, ನಾನು ಎಲ್ಲಾ ತಿಳಿದಿದ್ದೇನೆ ಎನ್ನುವ ಕತ್ತಲೆಯ ಕೂಪದಲ್ಲಿದ್ದೆ, ಆದರೆ ನೀನು ಕಲಿತಿದ್ದು ಒಂದು ಕಲಿಯಬೇಕಾದದ್ದು ನೂರೊನ್ದು ಎಂಬುದನ್ನು ಹಿಂದು ಮನದಟ್ಟು ಮಾಡಿಕೊಟ್ಟಿದೆ. ನನ್ನ ಬಿಟ್ಟರೆ ಬುದ್ದಿವಂತರಿಲ್ಲ ಎನ್ನುತ್ತಿದ್ದ ನಾನು ಈಗ ಆ ಅಮಲಿನಿಂದ ದೂರ ಸರಿದಿದ್ದೇನೆ. ನನ್ನ ಅಹಂಕಾರ, ಜಂಬ ಎಲ್ಲವೂ ಮೊದಲಿಗಿಂತ ಕಡಿಮೆ ಆಗಿದೆ ಎನ್ನುವುದು ನಾನು ಗಮನಿಸಿದ ಮೊದಲ ಅಂಶ. ಜೊತೆಯಲ್ಲಿ ಪತ್ರಿಕೋದ್ಯಮ ಅಂದರೆ ಏನು ಅನ್ನುವ ವಿಷಯವೂ ನಿಧಾನವಾಗಿ ಅರಿವಾಗುತ್ತಿದೆ, ನಡೆ, ನುಡಿ, ನಡುವಳಿಕೆ, ಭಾಷೆ, ಬಾವ, ಅಭಿವ್ಯಕ್ತಿ, ಚಿಂತನ ಲಹರಿ ಹೀಗೆ ಎಲ್ಲವೂ ಬದಲಾಗಿದೆ.
ನನ್ನಲ್ಲಿ ಸಮಾಜಮುಖಿಯಾಗಿ ಬೆಳೆಯಬೇಕಾದ ಎಲ್ಲಾ ಅಂಶಗಳು ಬೇರುರುತ್ತಿದೆ. ಯಾವುದೇ ಒಂದು ವಿಷಯದ ಬಗ್ಗೆ ಬರೆಯುವಾಗಾಗಲೀ, ಚರ್ಚಿಸುವಾಗಾಗಲೀ ಎಷ್ಟು ವಸ್ತುನಿಷ್ಟವಾಗಿ ಇರಬೇಕು ಎನ್ನುವುದನ್ನು ಕಲಿಯುತ್ತಿದ್ದೇನೆ. ಬದುಕು ಬೇರೆ ಬರಹ ಬೇರೆ ಎನ್ನುವ ಮಾತು ಸುಳ್ಳು ಎಂಬುದನ್ನೂ ಅರಿತೆ, ಆದರೆ ಬರವಣಿಗೆಯೇ ಬದುಕು ಎನ್ನುವ ಜನರನ್ನೂ ನೋಡಿದೆ.
ನನ್ನಂತ ಬರಹಗಾರನಿಲ್ಲ ಎನ್ನುವ ಬ್ರಮೆಯಲ್ಲಿ ಮುಳುಗಿದ್ದ ನನಗೆ ಈಗ ಅಂತಹ ಜಂಬವಿಲ್ಲ. ನನ್ನಲ್ಲಿ ಮತ್ತೊಬ್ಬ 'ನಾನು' ಎನ್ನುವ ರಾಕ್ಷಸನೊಬ್ಬ ಇದ್ದ, ಆದರೆ ಆ ರಾಕ್ಷಸನಿಗೆ ಹಿಂದು ಪತ್ರಿಕೆ ತಕ್ಕ ಶಾಸ್ತಿಯನ್ನು ಮಾಡಿ ಓಡಿಸಿದೆ. ಈಗ ನನ್ನಲ್ಲಿ ನಾನು ಎನ್ನುವ ಬದಲು ಎಲ್ಲರಲ್ಲೊಬ್ಬ ನಾನು ಎನ್ನುವ ದೋರಣೆ ಬಂದಿದೆ. ಅನಾನುಭಾವಿಯಾದ ನಾನು ನಾನೇ ಅನುಭವಿ ಅನ್ನುತ್ತಿದ್ದೆ ಈಗ ನಿಜವಾದ ಅನುಭವದ ಅನಭವ ಆಗಿದೆ. ಮನದಲ್ಲಿ ಚಿಂತನೆಯ ಮಂಥನವಾಗಿದೆ, ಆಗುತ್ತಿದೆ. ಇನ್ನೂ ನನ್ನ ತರಬೇತಿಯ ಕಾಲ ಮುಗಿದಿಲ್ಲವಾದ್ದರಿಂದ ನನ್ನ ಭಾಷಣವನ್ನು ಇಲ್ಲಿಯೇ ನಿಲ್ಲಿಸುವುದು ಸೂಕ್ತ. 

1 comment:

  1. nice share of your experience... congrats for knowing about yourself and tried to correct it... as i am also a journalism student i have to know even more experience of your internship and studies...

    ReplyDelete