Search This Blog

Friday, August 21, 2009

ಭೂಮಿ ಸೂರ್ಯನ ರಹಸ್ಯ

ಹೇಳಿದ ಮೊದಲಿಗ ಆರ್ಯಭಟ

ಪಾಶ್ಚಿಮಾತ್ಯರಿಗೆ ಅದು ಎಲ್ಲಿ ಗೊತ್ತು

ಆರ್ಯಭಟ ನೆಂದರೆ ಬರಿ (೦) ಶೂನ್ಯವೋ -ಶರ್ಮ

ಸೂರ್ಯನೇ ಕೇಂದ್ರ ಬಿಂದು ಸೂರ್ಯನ ಸುತ್ತ

ತಿರುಗುತಿದೆ ಭೂಮಿ ಅಂದನಾ ಗೆಲಿಲಿಯೋ

ಬೆನ್ಹತ್ತಿ ಅವನನ್ನು ಅಟ್ಟಿಸಿ ಕೊಂದರೋ

ಸತ್ಯವೆಂಬುದು ಎಂದೆಂದಿಗೂ ಕಹಿಯೋ -ಶರ್ಮ

ಶರ್ಮನಾ ಮರ್ಮ

ಸುಖ-ದುಃಖ ಗಳು ವಂದೇ ನಾಣ್ಯದ ಎರಡು ಮುಖ
ಇದನು ಸಮಭಾವದಿ ಸ್ವೀಕರಿಸು
ಆಗದೇ ಇದ್ದಲ್ಲಿ ಎರಡು ನಾಣ್ಯವ ಅಂಟಿಸಿ
ಸುಖದಿಂದ ನಗು ನಗುತ ಬಾಳೋ-ಶರ್ಮ

ಶರ್ಮನಾ ಮರ್ಮ

ಮಾನವನಿಂದ ಮಂಗನಾದ ಡಾರ್ವಿನನ ವಾದ
ಅವನು ಹೇಳಿದುದು ನಿಜವಾಗಲು ನಿಜವೇ
ಮಾನವನ ಮುಖ ನೋಡಿದರೆ ಹೌದೆನ್ನಿಸುವುದು
ಮಂಗನ ಹೃದಯ ನೋಡಿದರೆ ಅಲ್ಲವೇ ಅಲ್ಲ ಅನಿಸುವುದು-ಶರ್ಮ

ಶರ್ಮನಾ ಮರ್ಮ

ಪರದೇಶ ನೋಡಲು ಅಪಾರ ಹಣ ಬೇಕು
ಯಾರು ಕೊಡುವವರು ತಂದೆಯೋ,ಬನ್ಧುವೋ
ಪರದೇಶ ನೋಡಲು ಸರಕಾರ , ಪರರ ಸಹಾಯ ಬೇಕು
ಪರಲೋಕ ಸೇರಿಸಲು , doctor vabbane saakallo-sharma

ಶರ್ಮನಾ ಮರ್ಮ

ಜೀವನವೊಂದು ಕಥಾ ಸಂಕಲನ
ನಿನದು ಒಂದು ಕಥನ
ಕಳ್ಳನೋ-ಕಕನೋ,ಧರ್ಮಿಯೋ -ಅಧರ್ಮಿಯೋ
ಇತ್ತುದನೆ ಮಾಡು ಧರ್ಮ-ಕರ್ಮಗಳು ನಿನದಲ್ಲ ನಡೆ ಮುಂದೆ- ಶರ್ಮ

ಶರ್ಮನಾ ಮರ್ಮ

ಮಾತನಾಡುವ ಹಕ್ಕು ಎಲ್ಲರಿಗು ಉಂಟು
ಆದರೆ ಮಾತಿನ ಅಧಿಕಾರ ಮೂರ್ಖನದು ಮಾತ್ರ
ಮಾತನಾಡು ಇನ್ನು ಮೊದಲು ಮೂರ್ಖನ ಕರೆದು
ಆತನೇ ಋಜುವಾತು ಮಾಡುವನು -ಶರ್ಮ

ಶರ್ಮನಾ ಮರ್ಮ

ತಪ್ಪು ಮಾಡುವನು ಮನುಜ ಇದು
ಲೋಕದಲಿ ಸಹಜ, ಅದ ತಿದ್ದಿ ನಡೆದರೆ
ತುಂಬುವುದು ಕೀರ್ತಿ ಕಣಜ
ತಿಳಿ ಮನದಿ ಅರಿ ಇದನ -ಶರ್ಮ

ಶರ್ಮನಾ ಮರ್ಮ

ಬದುಕೆಂಬುದೆ ಹೀಗೆ ಮೂರು ದಿನದ ಸಂತೆ
ಯಾತಕಿಲ್ಲದ ಮಾತು ಬರಿ ಅಂತೆ ಕಂತೆ
ಗೋರಿ ಏರುವ ಮುನ್ನ
ನಿನ್ನ ನೀನರಿ -ಶರ್ಮ