Search This Blog

Saturday, August 14, 2010

ಪೆಪ್ಪರ್ಮೆಂಟ್, ಪಂಚಕಜ್ಜಾಯದ ಸ್ವಾತಂತ್ರದ ದಿನಗಳು

ನಾನಾಗ ಆರೋ, ಏಳೋ ತರಗತಿಯವನಿದ್ದೆ. ನನಗೆ ಸ್ವಾತಂತ್ರ ಹೋರಾಟವೆಂದರೆ ಮೇಷ್ಟ್ರ ಭಾಷಣ, ನಂತರ ಒಂದು ಪೆರೇಡ್, ಮತ್ತೆ ಅಥಿತಿಗಳ ಭಾಷಣ ಅದಾದಮೇಲೆ ನನಗೆ ನಿಜವಾದ ಸ್ವತಂತ್ರ ಕೈತುಂಬಾ ಸಿಗುತ್ತಿತ್ತು. ಅದೇ, ಪೆಪ್ಪರ್ಮೆಂಟ್, ಪಂಚಕಜ್ಜಾಯ ನಿಜವಾದ ಸ್ವತಂತ್ರ ಎಂಬ ಬಾವ ನನ್ನಲ್ಲಿತ್ತು. ಹರುಕು ಚಡ್ಡಿ ಹಾಕಿಕೊಂಡು ಗಾಂಧೀಜೀಕಿ ಜೈ ಎನ್ನುವುದು ಏನೋ ಒಂದು ಮಜಬೂತಾದ ವಿಷಯವಾಗಿತ್ತು. ದೊಡ್ಡವರ ಭಾಷಣದ ಅರ್ಥ ಅನರ್ಥಗಳು ಯಾವುದೊಂದು ತಿಳಿಯದ ವಯಸ್ಸು ನನದು. ತಿಳಿದ ಮೇಲೆ ಪೆಪ್ಪರ್ಮೆಂಟ್ ತಿನ್ನುವ ಮನಸ್ಸೇ ಇಲ್ಲವಾಯಿತು, ಸ್ವಾತಂತ್ರವೆಂದರೇನು? ಯಾವಾಗ ಬಂತು? ಈ ಎಲ್ಲಾ ಅಂಶ ತಿಳಿದ ಮೇಲೆ ಮನಸ್ಸಿನಲ್ಲಿ  'ನಾನು ಸ್ವತಂತ್ರನೆ' ಎನ್ನುವ ಪ್ರಶ್ನೆ ಮೂಡಿತು. ಸ್ವಾತಂತ್ರವನ್ನು ಬ್ರಿಟೀಷರು ಕೊಟ್ಟರೆ, ಕೊಡಲು ಅವರಾರು. ಸ್ವಾತಂತ್ರವನ್ನು ಕಸಿಯಬಹುದೇ ವಿನಃ ಕೊಡಲಾಗುವುದಿಲ್ಲ. ಅಂದು ಬ್ರಿಟಿಷರು ಇಂದು ರಾಜಕಾರಿಣಿಗಳು, ಬಹು-ರಾಷ್ಟ್ರೀಯ ಸಂಸ್ಥೆಗಳು ನಮ್ಮ ಸ್ವಾತಂತ್ರವನ್ನು ದೋಚುತ್ತಿದೆ. ಮೊದಲಿನ ಸ್ಥಿತಿ ಹೆಚ್ಚಿದೆಯೇ ಹೊರತು ಬದಲಾಗಿಲ್ಲ. ಒಂದು ರೀತಿಯಲ್ಲಿ ಪೆಪ್ಪರ್ಮೆಂಟ್ ದಿನಗಳೇ ಚೆನ್ನಾಗಿದ್ದವು, ಅಂದು ನನಗೆ ಯಾವುದೇ ಯೋಚನೆಗಳಿರಲಿಲ್ಲ . ನಾನು ನನ್ನ ಪೆಪ್ಪರ್ಮೆಂಟ್ ಇವೆ ಆಗಿದ್ದವು. ಆದರೆ ಈಗ ಸ್ವಾತಂತ್ರದಿನ ಅಂದರೆ ಪೆಪ್ಪರ್ಮೆಂಟ್ ಕೂಡ ಕಹಿಯುಗುತ್ತದೆ. ಆ ದಿನದ ಹಿತ ಇಂದು ಇಲ್ಲ.

No comments:

Post a Comment