Search This Blog

Friday, August 13, 2010

ಬದುಕು ಭಾರವಾಗಿದೆ

ಬದುಕು ಭಾರವಾಗಿದೆ  ಗೆಳೆಯ
ಇಳಿಸಿ ಹೋಗುವೆಯ ಹೆಗಲ ಹೊರೆಯ
ದೃಷ್ಟಿ ತೋಚುತ್ತಿಲ್ಲ
ದಾರಿ ಹೊಳೆಯುತ್ತಿಲ್ಲ
ಸಾಕು ಸಾಕೆ ಸಾಕು ಅನಿಸುತಿದೆ
ಜೀವನ ಯಾನ
ಇಳಿಸಿ ಹೋಗುವೆಯ ಹೆಗಲ ಹೊರೆಯ
ನಡೆದುದೆಷ್ಟೋ ದೂರ ಅಗಾಧ
ಹೊತ್ತ ಹೊರೆ ನಿಟ್ಟುಸಿರ ವಿಷಾದ
ನಡೆಯಬೇಕಿದೆ ಇನ್ನೂ  ಗಾವುದ, ಗಾವುದ......
ಕಾಣಲೆಲ್ಲಿದೆ   ನೆರಳ ತಾವು
ಹೆಜ್ಜೆ ಇಟ್ಟಲ್ಲೆಲ್ಲ ತಲೆಯತ್ತಿ ನಿಂತಿದೆ
ವಿಷಕಾರುವ ಹಾವು
ದಾರಿ ತಿಳಿಯದಾಗಿದೆ ಗೆಳೆಯ
ಇಳಿಸಿ ಹೋಗಲಾರೆಯ ಜೀವದಾ ಗೆಳೆಯ
ನನ್ನ ಸುತ್ತಲೂ ಕತ್ತಲು
ಬರಿಯ ಕತ್ತಲಲ್ಲವದು
ಜೀವ ಹಿಂಡುವ ಕತ್ತಲು
ಹೃದಯ ತಂತಿಯ ಹರಿಯುವ ಕತ್ತಲು
ಕತ್ತಲ ಕೊಳೆ  ತೊಳೆವುದೆನಿತು
ಬೇಡದಾ ಜೀವ ಬದುಕುವುದೆನಿತು
ಸಾಕು ಸಾಕು ಈ ಮುಳ್ಳಿನ ಪಯಣ
ಬೇಕು ಬೇಕೇ ಬೇಕು ಅನಿಸುತಿದೆ ತೃಪ್ತಿಯ ಜೀವನ.
                                                                -ಶಶಕ

No comments:

Post a Comment