Search This Blog

Saturday, August 14, 2010

ಪೆಪ್ಪರ್ಮೆಂಟ್, ಪಂಚಕಜ್ಜಾಯದ ಸ್ವಾತಂತ್ರದ ದಿನಗಳು

ನಾನಾಗ ಆರೋ, ಏಳೋ ತರಗತಿಯವನಿದ್ದೆ. ನನಗೆ ಸ್ವಾತಂತ್ರ ಹೋರಾಟವೆಂದರೆ ಮೇಷ್ಟ್ರ ಭಾಷಣ, ನಂತರ ಒಂದು ಪೆರೇಡ್, ಮತ್ತೆ ಅಥಿತಿಗಳ ಭಾಷಣ ಅದಾದಮೇಲೆ ನನಗೆ ನಿಜವಾದ ಸ್ವತಂತ್ರ ಕೈತುಂಬಾ ಸಿಗುತ್ತಿತ್ತು. ಅದೇ, ಪೆಪ್ಪರ್ಮೆಂಟ್, ಪಂಚಕಜ್ಜಾಯ ನಿಜವಾದ ಸ್ವತಂತ್ರ ಎಂಬ ಬಾವ ನನ್ನಲ್ಲಿತ್ತು. ಹರುಕು ಚಡ್ಡಿ ಹಾಕಿಕೊಂಡು ಗಾಂಧೀಜೀಕಿ ಜೈ ಎನ್ನುವುದು ಏನೋ ಒಂದು ಮಜಬೂತಾದ ವಿಷಯವಾಗಿತ್ತು. ದೊಡ್ಡವರ ಭಾಷಣದ ಅರ್ಥ ಅನರ್ಥಗಳು ಯಾವುದೊಂದು ತಿಳಿಯದ ವಯಸ್ಸು ನನದು. ತಿಳಿದ ಮೇಲೆ ಪೆಪ್ಪರ್ಮೆಂಟ್ ತಿನ್ನುವ ಮನಸ್ಸೇ ಇಲ್ಲವಾಯಿತು, ಸ್ವಾತಂತ್ರವೆಂದರೇನು? ಯಾವಾಗ ಬಂತು? ಈ ಎಲ್ಲಾ ಅಂಶ ತಿಳಿದ ಮೇಲೆ ಮನಸ್ಸಿನಲ್ಲಿ  'ನಾನು ಸ್ವತಂತ್ರನೆ' ಎನ್ನುವ ಪ್ರಶ್ನೆ ಮೂಡಿತು. ಸ್ವಾತಂತ್ರವನ್ನು ಬ್ರಿಟೀಷರು ಕೊಟ್ಟರೆ, ಕೊಡಲು ಅವರಾರು. ಸ್ವಾತಂತ್ರವನ್ನು ಕಸಿಯಬಹುದೇ ವಿನಃ ಕೊಡಲಾಗುವುದಿಲ್ಲ. ಅಂದು ಬ್ರಿಟಿಷರು ಇಂದು ರಾಜಕಾರಿಣಿಗಳು, ಬಹು-ರಾಷ್ಟ್ರೀಯ ಸಂಸ್ಥೆಗಳು ನಮ್ಮ ಸ್ವಾತಂತ್ರವನ್ನು ದೋಚುತ್ತಿದೆ. ಮೊದಲಿನ ಸ್ಥಿತಿ ಹೆಚ್ಚಿದೆಯೇ ಹೊರತು ಬದಲಾಗಿಲ್ಲ. ಒಂದು ರೀತಿಯಲ್ಲಿ ಪೆಪ್ಪರ್ಮೆಂಟ್ ದಿನಗಳೇ ಚೆನ್ನಾಗಿದ್ದವು, ಅಂದು ನನಗೆ ಯಾವುದೇ ಯೋಚನೆಗಳಿರಲಿಲ್ಲ . ನಾನು ನನ್ನ ಪೆಪ್ಪರ್ಮೆಂಟ್ ಇವೆ ಆಗಿದ್ದವು. ಆದರೆ ಈಗ ಸ್ವಾತಂತ್ರದಿನ ಅಂದರೆ ಪೆಪ್ಪರ್ಮೆಂಟ್ ಕೂಡ ಕಹಿಯುಗುತ್ತದೆ. ಆ ದಿನದ ಹಿತ ಇಂದು ಇಲ್ಲ.

ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ

ಸ್ವಾತಂತ್ರ್ಯಕ್ಕೆ ಮಡಿದವರು  ಸಾವಿರಾರು ಜನ, ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಚಂದ್ರಶೇಖರ್ ಅಜಾದ್ ಹೀಗೆ ಪಟ್ಟಿ ಬಹಳ ದೊಡ್ಡದಾಗುತ್ತ ಹೋಗುತ್ತದೆ. ಆದರೆ ಪ್ರಶ್ನೆ ಮಾತ್ರ ಒಂದೇ ಒಂದು ಮನದಲ್ಲಿ ಕೊರೆಯುತ್ತದೆ. ಅದೇ ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ?
ಮಡಿದವರ, ದುಡಿದವರ ಕಷ್ಟಕ್ಕೆ ಕೊನೆಗೂ ಬೆಲೆ ಇಲ್ಲವೇ? ಭಗತ್ ಸಿಂಗ್ ಇದ್ದಿದ್ದರೆ  ನಮ್ಮ ಸ್ವಾತಂತ್ರವನ್ನು ಕಂಡು ನಗುತ್ತಿದ್ದನೇನೋ. ಪಾಪ ಪುಣ್ಯಾತ್ಮ ಪ್ರಾಣತೆತ್ತು ಹುತಾತ್ಮನಾದ. ಒಂದು ರೀತಿಯಲ್ಲಿ ಬಚಾವಾದ. ಊಟ, ನಿದ್ದೆ,ಶಾಂತಿ ಇಲ್ಲದೆ ಹಗಲಿರುಳು ದುಡಿದದ್ದಕ್ಕೆ ಸಿಕ್ಕ ಪ್ರತಿಪಲವೇನೆಂದರೆ ಸ್ವಾತಂತ್ರ ಎನ್ನುವ ಸುಳ್ಳು ಹಣೆಪಟ್ಟಿ. ಜಾಗತೀಕರಣದ ಬಲೆಯಲ್ಲಿ ಬಿದ್ದು ನರಳುತ್ತಿರುವ ಈ ಸಮಯದಲ್ಲಿ ಸ್ವಾತಂತ್ರ ದಿನ ಆಚರಿಸುವ ಮನ ಹೇಗೆ ಬಂದೀತು. ಸಾವಿರಾರು ಜನ ಇನ್ನೂ ಜೀತದ ಜೀವನ ಸಾಗಿಸುತ್ತಿರುವಾಗ ಸ್ವತಂತ್ರ ಪತಾಕೆ ಹೇಗೆ ಹಾರಿಸುವುದು. ಜಾಗತೀಕರಣ, ಖಾಸಗೀಕರಣ ಎಂಬ ಜ್ವಾಲೆಯಲ್ಲಿ ಬೇಯುತ್ತಿರುವ ನಮಗೆ ಅದು ಮಳೆಗಾಲದಲ್ಲಿ ಒಲೆಯ ಮುಂದೆ ಕೂತು ಮೈ ಬೆಚ್ಚಗೆ ಮಾಡಿಕೊಳ್ಳುವ ಒಲೆಯ ಬೆಂಕಿಯಲ್ಲ ಅದು ಒಂದು ಬೆಂಕಿಯ ಜ್ವಾಲೆಯ ವ್ಯೂಹ ಎಂಬುದನ್ನರಿಯಲು ಎಷ್ಟು ವರ್ಷಗಳು ಬೇಕೋ. ನಾವು ಸ್ವತಂತ್ರರು ಎಂಬ ಸುಳ್ಳು ಹಣೆಪಟ್ಟಿ ನಮಗೆ ನಿಜವಾಗಲೂ ಬೇಕಾ? ೬೩ ವರ್ಷಗಳ ನಂತರವೂ ನಾವು ಪೂರ್ಣ ಸ್ವತಂತ್ರರಲ್ಲ ಎಂಬ ಯೋಚನೆ ಬರುತ್ತಿದೆ. ಅಮೆರಿಕೆಯ ತಾಳಕ್ಕೆ ಎಷ್ಟು ವರ್ಷ ಕುಣಿಯುತ್ತಾರೋ  ಅಲ್ಲಿಯವರೆಗೆ ನಾವು ಪರತಂತ್ರರೆ. ಇದು ಅಪ್ಪಟ ಸತ್ಯ. ಹಾರಿಸಿ ಸುಳ್ಳು ಪತಾಕೆಯ, ಕೂಗಿ ಕೂಗಿ ಹೇಳಿ ನಾವು ಸ್ವತಂತ್ರರೆಂದು.

Friday, August 13, 2010

ಬದುಕು ಭಾರವಾಗಿದೆ

ಬದುಕು ಭಾರವಾಗಿದೆ  ಗೆಳೆಯ
ಇಳಿಸಿ ಹೋಗುವೆಯ ಹೆಗಲ ಹೊರೆಯ
ದೃಷ್ಟಿ ತೋಚುತ್ತಿಲ್ಲ
ದಾರಿ ಹೊಳೆಯುತ್ತಿಲ್ಲ
ಸಾಕು ಸಾಕೆ ಸಾಕು ಅನಿಸುತಿದೆ
ಜೀವನ ಯಾನ
ಇಳಿಸಿ ಹೋಗುವೆಯ ಹೆಗಲ ಹೊರೆಯ
ನಡೆದುದೆಷ್ಟೋ ದೂರ ಅಗಾಧ
ಹೊತ್ತ ಹೊರೆ ನಿಟ್ಟುಸಿರ ವಿಷಾದ
ನಡೆಯಬೇಕಿದೆ ಇನ್ನೂ  ಗಾವುದ, ಗಾವುದ......
ಕಾಣಲೆಲ್ಲಿದೆ   ನೆರಳ ತಾವು
ಹೆಜ್ಜೆ ಇಟ್ಟಲ್ಲೆಲ್ಲ ತಲೆಯತ್ತಿ ನಿಂತಿದೆ
ವಿಷಕಾರುವ ಹಾವು
ದಾರಿ ತಿಳಿಯದಾಗಿದೆ ಗೆಳೆಯ
ಇಳಿಸಿ ಹೋಗಲಾರೆಯ ಜೀವದಾ ಗೆಳೆಯ
ನನ್ನ ಸುತ್ತಲೂ ಕತ್ತಲು
ಬರಿಯ ಕತ್ತಲಲ್ಲವದು
ಜೀವ ಹಿಂಡುವ ಕತ್ತಲು
ಹೃದಯ ತಂತಿಯ ಹರಿಯುವ ಕತ್ತಲು
ಕತ್ತಲ ಕೊಳೆ  ತೊಳೆವುದೆನಿತು
ಬೇಡದಾ ಜೀವ ಬದುಕುವುದೆನಿತು
ಸಾಕು ಸಾಕು ಈ ಮುಳ್ಳಿನ ಪಯಣ
ಬೇಕು ಬೇಕೇ ಬೇಕು ಅನಿಸುತಿದೆ ತೃಪ್ತಿಯ ಜೀವನ.
                                                                -ಶಶಕ

Monday, August 9, 2010

ನುಡಿವ ಮೋಹನ ಮುರಳಿ

ಯಾರು ಏತಕೆ ಮುರಿದು ಬಿಸುಟರೋ
ನುಡಿವ ಮೋಹನ ಮುರಳಿಯ
ಯಾವ ಸ್ವಾರ್ಥದ ಗಳಿಕೆ ಇಹುದೋ
ಚಿವುಟಿ ತೆಗೆದರು ಚೈತ್ರವ.
ಮೌನ ಮೀರಿದ ಮಾತದೆಲ್ಲಿದೆ
ಮಾತು ಮೌನದ ತೊಟ್ಟಿಲು
ರಾಗವಿರದ ಹಾಡದೆಲ್ಲಿದೆ
ರಾಗ ಹಾಡಿನ ಮೆಟ್ಟಿಲು
ಸ್ಪರ್ಶವಿರದೇ ರಸವದೆಲ್ಲಿದೆ
ಬಾವ ಚಂದನ ಬತ್ತಲು.
ಮನಸು ಮುದುಡಿರೆ ಬರಿ ಶೂನ್ಯ ಬಾವ
ರಾಧೆ ಇರದೇ ಇಹನೆ ಮಾಧವ.
                                 -ಶಶಕ (ಶರತ್ ಶರ್ಮ ಕಲಗಾರು)

Sunday, August 1, 2010

nanna anubhava in The Hindu

ಹಿಂದುವಿನಲ್ಲಿ ಆಂತರಿಕ ತರಬೇತಿ ಪಡೆಯಲು ಬಂದ ನಾನು ಆಂತರಿಕವಾಗಿ ನನ್ನನ್ನು ಬದಲಾಯಿಸಿ ಕೊಂಡಿದ್ದಲ್ಲದೆ, ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಅವಶ್ಯಕವಾದ ವಿಷಯಗಳನ್ನು ಕಲಿಯುತ್ತಿದ್ದೇನೆ. ತರಬೇತಿ ಇಂದ ಅನುಭವ ಬೆಳಯುತ್ತಿದೆ, ಈ ಅನುಭವಕ್ಕಿಂತ ನನಗೆ ಅನುಭವಿಗಳ ಜೊತೆ ಕಳೆಯುತ್ತಿರುವ ಘಳಿಗೆ ಅಮೂಲ್ಯವದದ್ದು.
ಮುಖ್ಯವಾಗಿ, ನಾನು ಎಲ್ಲಾ ತಿಳಿದಿದ್ದೇನೆ ಎನ್ನುವ ಕತ್ತಲೆಯ ಕೂಪದಲ್ಲಿದ್ದೆ, ಆದರೆ ನೀನು ಕಲಿತಿದ್ದು ಒಂದು ಕಲಿಯಬೇಕಾದದ್ದು ನೂರೊನ್ದು ಎಂಬುದನ್ನು ಹಿಂದು ಮನದಟ್ಟು ಮಾಡಿಕೊಟ್ಟಿದೆ. ನನ್ನ ಬಿಟ್ಟರೆ ಬುದ್ದಿವಂತರಿಲ್ಲ ಎನ್ನುತ್ತಿದ್ದ ನಾನು ಈಗ ಆ ಅಮಲಿನಿಂದ ದೂರ ಸರಿದಿದ್ದೇನೆ. ನನ್ನ ಅಹಂಕಾರ, ಜಂಬ ಎಲ್ಲವೂ ಮೊದಲಿಗಿಂತ ಕಡಿಮೆ ಆಗಿದೆ ಎನ್ನುವುದು ನಾನು ಗಮನಿಸಿದ ಮೊದಲ ಅಂಶ. ಜೊತೆಯಲ್ಲಿ ಪತ್ರಿಕೋದ್ಯಮ ಅಂದರೆ ಏನು ಅನ್ನುವ ವಿಷಯವೂ ನಿಧಾನವಾಗಿ ಅರಿವಾಗುತ್ತಿದೆ, ನಡೆ, ನುಡಿ, ನಡುವಳಿಕೆ, ಭಾಷೆ, ಬಾವ, ಅಭಿವ್ಯಕ್ತಿ, ಚಿಂತನ ಲಹರಿ ಹೀಗೆ ಎಲ್ಲವೂ ಬದಲಾಗಿದೆ.
ನನ್ನಲ್ಲಿ ಸಮಾಜಮುಖಿಯಾಗಿ ಬೆಳೆಯಬೇಕಾದ ಎಲ್ಲಾ ಅಂಶಗಳು ಬೇರುರುತ್ತಿದೆ. ಯಾವುದೇ ಒಂದು ವಿಷಯದ ಬಗ್ಗೆ ಬರೆಯುವಾಗಾಗಲೀ, ಚರ್ಚಿಸುವಾಗಾಗಲೀ ಎಷ್ಟು ವಸ್ತುನಿಷ್ಟವಾಗಿ ಇರಬೇಕು ಎನ್ನುವುದನ್ನು ಕಲಿಯುತ್ತಿದ್ದೇನೆ. ಬದುಕು ಬೇರೆ ಬರಹ ಬೇರೆ ಎನ್ನುವ ಮಾತು ಸುಳ್ಳು ಎಂಬುದನ್ನೂ ಅರಿತೆ, ಆದರೆ ಬರವಣಿಗೆಯೇ ಬದುಕು ಎನ್ನುವ ಜನರನ್ನೂ ನೋಡಿದೆ.
ನನ್ನಂತ ಬರಹಗಾರನಿಲ್ಲ ಎನ್ನುವ ಬ್ರಮೆಯಲ್ಲಿ ಮುಳುಗಿದ್ದ ನನಗೆ ಈಗ ಅಂತಹ ಜಂಬವಿಲ್ಲ. ನನ್ನಲ್ಲಿ ಮತ್ತೊಬ್ಬ 'ನಾನು' ಎನ್ನುವ ರಾಕ್ಷಸನೊಬ್ಬ ಇದ್ದ, ಆದರೆ ಆ ರಾಕ್ಷಸನಿಗೆ ಹಿಂದು ಪತ್ರಿಕೆ ತಕ್ಕ ಶಾಸ್ತಿಯನ್ನು ಮಾಡಿ ಓಡಿಸಿದೆ. ಈಗ ನನ್ನಲ್ಲಿ ನಾನು ಎನ್ನುವ ಬದಲು ಎಲ್ಲರಲ್ಲೊಬ್ಬ ನಾನು ಎನ್ನುವ ದೋರಣೆ ಬಂದಿದೆ. ಅನಾನುಭಾವಿಯಾದ ನಾನು ನಾನೇ ಅನುಭವಿ ಅನ್ನುತ್ತಿದ್ದೆ ಈಗ ನಿಜವಾದ ಅನುಭವದ ಅನಭವ ಆಗಿದೆ. ಮನದಲ್ಲಿ ಚಿಂತನೆಯ ಮಂಥನವಾಗಿದೆ, ಆಗುತ್ತಿದೆ. ಇನ್ನೂ ನನ್ನ ತರಬೇತಿಯ ಕಾಲ ಮುಗಿದಿಲ್ಲವಾದ್ದರಿಂದ ನನ್ನ ಭಾಷಣವನ್ನು ಇಲ್ಲಿಯೇ ನಿಲ್ಲಿಸುವುದು ಸೂಕ್ತ. 

Friday, August 21, 2009

ಭೂಮಿ ಸೂರ್ಯನ ರಹಸ್ಯ

ಹೇಳಿದ ಮೊದಲಿಗ ಆರ್ಯಭಟ

ಪಾಶ್ಚಿಮಾತ್ಯರಿಗೆ ಅದು ಎಲ್ಲಿ ಗೊತ್ತು

ಆರ್ಯಭಟ ನೆಂದರೆ ಬರಿ (೦) ಶೂನ್ಯವೋ -ಶರ್ಮ

ಸೂರ್ಯನೇ ಕೇಂದ್ರ ಬಿಂದು ಸೂರ್ಯನ ಸುತ್ತ

ತಿರುಗುತಿದೆ ಭೂಮಿ ಅಂದನಾ ಗೆಲಿಲಿಯೋ

ಬೆನ್ಹತ್ತಿ ಅವನನ್ನು ಅಟ್ಟಿಸಿ ಕೊಂದರೋ

ಸತ್ಯವೆಂಬುದು ಎಂದೆಂದಿಗೂ ಕಹಿಯೋ -ಶರ್ಮ